ಸೋಮವಾರ, ಫೆಬ್ರವರಿ 24, 2020

ಕೊಟ್ಟೂರೇಶ್ವರನ ವೈಭವದ ತೇರು

 ಸಮಾನತೆಯ ಹರಿಕಾರ, ಪವಾಡ ಪುರುಷ, ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾ ರಥೋತ್ಸವ ನಿನ್ನೆ ಸಂಜೆ ಸಂಭ್ರಮದಿಂದ ಜರುಗಿತು. ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಬಳಿಯ ತೇರು ಬಯಲು ಪ್ರದೇಶದಲ್ಲಿ ಅದ್ಧೂರಿ ರಥೋತ್ಸವ ನಡೆಯಿತು.
ರಥೋತ್ಸವದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಬಳ್ಳಾರಿ ಜಿಲ್ಲೆಯಲ್ಲದೇ ದಾವಣಗೆರೆ, ಹಾವೇರಿ, ಗದಗ, ಮುಂಡರಗಿ, ಹಾಸನ ಸೇರಿದಂತೆ ನಾನಾ ಭಾಗಗಳಿಂದ 30 ಸಾವಿರಕ್ಕೂ ಹೆಚ್ಚು ಭಕ್ತರು ಕಾಲ್ನಡಿಗೆಯಲ್ಲಿ ಜಾತ್ರೆಗೆ ಆಗಮಿಸಿದ್ದರು. ಈ ಬಾರಿಯೂ 85 ವರ್ಷದ ಸಂತೆಬೆನ್ನೂರಿನ ಅಜ್ಜಿ ಕಮಲಮ್ಮ 58 ಕಿ.ಮೀ ಪಾದಯಾತ್ರೆ ಮಾಡಿ ಬಂದಿದ್ದು ವಿಶೇಷವಾಗಿತ್ತು.
ಇಲ್ಲಿ ಮೂಲ ನಕ್ಷತ್ರದಲ್ಲಿ ರಥೋತ್ಸವ ನಡೆಯುವುದು ಒಂದು ವಿಶೇಷವಾದರೆ, ಕೊಟ್ಟೂರೇಶ್ವರ ಸ್ವಾಮಿಗೆ ದಲಿತ ಮಹಿಳೆ ಆರತಿ ಬೆಳಗುವುದು ಮತ್ತೂ ಒಂದು ವಿಶೇಷ. ಗುರು ಕೊಟ್ಟೂರೇಶ್ವರ ಸ್ವಾಮಿಯ ದೇಗುಲದಿಂದ ಹೊರಡುವ ಪಲ್ಕಕ್ಕಿ ದಲಿತ ಕೇರಿಯ ಬಳಿ ಬಂದಾಗ, ದಲಿತ ಮಹಿಳೆ ಆರತಿ ಬೆಳಗುತ್ತಾರೆ
80 ಅಡಿ ಎತ್ತರದಲ್ಲಿ ಸ್ವಾಮಿಯ ಮೂರ್ತಿ ಆಸೀನವಾಗುತ್ತಿದ್ದಂತೆ, ಭಕ್ತರು, ರಥ ಎಳೆದರು. 2017ರ ಫೆಬ್ರವರಿ 21ರಂದು ರಥ ಆಕಸ್ಮಿಕವಾಗಿ ಉರುಳಿ ಬಿದ್ದಿತ್ತು, 2018 ರಲ್ಲೇ ಹೊಸ ತೇರನ್ನು 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಎಳೆಯಲಾಯಿತು.
ಕೊಟ್ಟೂರೇಶ್ವರ ಸ್ವಾಮಿಯ ನೂತನ ರಥಗಡ್ಡೆಯನ್ನು 'ರಥಾಂಗ ಹೋಮ'ದ ಮೂಲಕ ಶಿಲ್ಪಿಗಳು ಸನ್ನಿಧಾನಕ್ಕೆ ಶುಕ್ರವಾರ ಸಮರ್ಪಿಸಿದ್ದಾರೆ. ಕೊಟ್ಟೂರೇಶ್ವರನ ನೂರು ಟನ್ ತೂಕದ ನೂತನ ರಥ ಉತ್ಸವಕ್ಕೆ ಸಿದ್ಧವಾಗಿದೆ.
ಕೊಟ್ಟೂರೇಶ್ವರ ಸ್ವಾಮಿಯ ನೂತನ ರಥಗಡ್ಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ನಿರ್ಮಾಣ ಮಾಡಿದ ಶಿಲ್ಪಿಗಳು ರಥಾಂಗ ಹೋಮವನ್ನು ಧಾರ್ಮಿಕ ವಿಧಿ ವಿಧಾನದ ಮೂಲಕ ನೆರವೇರಿಸಿ, ಕೊಟ್ಟೂರೇಶ್ವರನಿಗೆ ಸಮರ್ಪಿಸಿದರು. ರಥದ ಗಡ್ಡೆ ಹದಿನೆಂಟೂವರೆ ಅಡಿ ಎತ್ತರವಿದ್ದು, ಶಿಲ್ಪಿ ಜಿ.ಬಿ.ಹಂಸಾನಂದ ಆಚಾರ್ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಿಲ್ಪಿಗಳು ಕೇವಲ ಎಂಟು ತಿಂಗಳಲ್ಲಿ ರಥ ಸಿದ್ಧಪಡಿಸಿದ್ದಾರೆ.
ರಥದ ಗಡ್ಡೆಯನ್ನು ಸಾಗುವಾನಿ ಹಾಗೂ ಹೊನ್ನೆ ಕಟ್ಟಿಗೆಯಿಂದ ನಿರ್ಮಿಸಲಾಗಿದೆ. ಹಳೆಯ ರಥದ ಆಕಾರದಲ್ಲಿ ಹೊಸದನ್ನು ಶಿಲ್ಪಿಗಳು ಪುನರ್ ನಿರ್ಮಾಣ ಮಾಡಿದ್ದು, ಶ್ರದ್ಧೆ - ಭಕ್ತಿಯನ್ನು ಮೂಡಿಸುತ್ತಿದೆ. ಇದರ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ಎರಡು ಕೋಟಿ ರುಪಾಯಿ ಅನುದಾನ ನೀಡಿದೆ.
ಬೆಂಗಳೂರಿನ ರಾಘವಶರ್ಮ ನೇತೃತ್ವದ ಹದಿನಾರು ಋತ್ವಿಜರ ತಂಡ ಬೆಳಿಗ್ಗೆ ಆರು ಮೂವತ್ತರಿಂದ ಮಧ್ಯಾಹ್ನ ಒಂದು ಮೂವತ್ತರವರೆಗೆ ಗಣಪತಿ ಹೋಮ, ವಾಸ್ತುಹೋಮ, ವಿಶ್ವಕರ್ಮಹೋಮ, ರಥಹೋಮ, ಮಹಾಲಕ್ಷ್ಮೀ, ಕಾಳೀಕಾಂಬ, ಗಾಯತ್ರಿ, ಲಕ್ಷ್ಮೀ, ಸರಸ್ವತಿ, ಚೌಡೇಶ್ವರಿ, ಷಣ್ಮುಖ, ಅಷ್ಟದಿಕ್ಪಾಲಕರು, ಕಾಮಧೇನು= ಕಲ್ಪವೃಕ್ಷ, ನವಗ್ರಹ ಹೋಮಗಳನ್ನು ನೆರವೇರಿಸಿತು.ಮಹಲ್ ಮಠದ ಶಂಕರ ಸ್ವಾಮೀಜಿ ಪೂರ್ಣಾಹುತಿ ನೀಡಿದರು. ಹಿರೇಮಠದ ಕ್ರಿಯಾಮೂರ್ತಿ ಶಂಕರ ಸ್ವಾಮೀಜಿ, 

1 ಕಾಮೆಂಟ್‌: